ಕಾರ್ಬೋಮೈಸಿನ್

ಸ್ಟ್ರೆಪ್ಟೊಮೈಸಿಸ್ ಹಾಲ್‍ಸ್ಟೇಡಿಯಿಂದ ಉತ್ಪತ್ತಿಯಾಗುವ ಜೀವಿವಿರೋಧಕ (ಆಂಟಿಬಯಾಟಿಕ್) ವಸ್ತು. ಮ್ಯಾಗ್ನಾಮೈಸಿನ್ ಪರ್ಯಾಯನಾಮ. ಮೊದಲಬಾರಿಗೆ 1953ರಲ್ಲಿ ಇದನ್ನು ಪ್ರತ್ಯೇಕಿಸಿದರು. ಇದು ನಿರ್ವರ್ಣ ಪದಾರ್ಥ. ಇದರ ಕರಗುವ ಬಿಂದು  2120-2140 ಸೆಂ. ರಾಸಾಯನಿಕ ಸೂತ್ರ  ಅ42ಊ67ಔ16ಓ. ಇದು ಮ್ಯಾಕ್ರೊಲೈಡ್ ಗುಂಪಿಗೆ ಸೇರಿದ (ಮ್ಯಾಕ್ರೊಸೈಕ್ಲಿಕ್ ಲ್ಯಾಕ್ಟೋಸ್) ಜೀವಿವಿರೋಧಕ. ಮುಖ್ಯವಾಗಿ ಇದಕ್ಕೆ ಗ್ರಾಮ್‍ಪಾಸಿಟಿವ್ ಬ್ಯಾಕ್ಟೀರಿಯಗಳ (ಸ್ಟ್ರೆಪ್ಟೋಕಾಕಸ್, ಸ್ಯಾಫಿಲೋಕಾಕಸ್ ಬ್ಯಾಸಿಲೈ) ಮೇಲೆ ಕ್ರಿಯಾಶಕ್ತಿ ಉಂಟು. ಪ್ರಾಯಶಃ ಅವುಗಳಲ್ಲಿನ ರೈಬೋಸೋಮುಗಳಿಗೆ ಇದು ಅಂಟಿಕೊಂಡು ಅವುಗಳ ಪ್ರೋಟೀನ್ ಸಂಶ್ಲೇಷಣೆಯನ್ನು ತಡೆಗಟ್ಟುವುದೇ ಈ ಕ್ರಿಯಾಶಕ್ತಿಗೆ ಕಾರಣವಿರಬಹುದು. ಕಾರ್ಬೊಮೈಸಿನ್-ಬಿ ಇದಕ್ಕೆ ಹತ್ತಿರ ಸಂಬಂಧವುಳ್ಳ ಜೀವಿವಿರೋಧಕ. ಆದರೆ ಇದರಲ್ಲಿ ಎಥಿಲೀನ್ ಆಕ್ಸೈಡ್ ರಚನೆ ಇರುವುದಿಲ್ಲ. ಇದರ ಕರಗುವ ಬಿಂದು 1410-1440ಸೆಂ.

(ಎಂ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ